Please enable javascript.ಬುಧವಾರ (ಜೂನ್‌ 19) ಈ ಮೂರು ಷೇರು ಖರೀದಿಗೆ ವೈಶಾಲಿ ಪರೇಖ್ ಶಿಫಾರಸು - vaishali parekh recommends three stocks to buy today june 19 gnfc indusind bank manappuram finance know target | The Economic Times Kannada

ಬುಧವಾರ (ಜೂನ್‌ 19) ಈ ಮೂರು ಷೇರು ಖರೀದಿಗೆ ವೈಶಾಲಿ ಪರೇಖ್ ಶಿಫಾರಸು

Authored by ಬಾನುಪ್ರಸಾದ ಕೆ ಎನ್‌ | The Economic Times Kannada | Updated: 19 Jun 2024, 9:20 am

Vaishali Parekh Stock picks: ವೈಶಾಲಿ ಪರೇಖ್ ಅವರು ಇಂದು ಜೂನ್‌ 19ರ ಬುಧವಾರ ಖರೀದಿಸಲು ಮೂರು ಷೇರುಗಳನ್ನು ಶಿಫಾರಸು ಮಾಡಿದ್ದಾರೆ. ಜಿಎನ್‌ಎಫ್‌ಸಿ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಮಣಪ್ಪುರಂ ಫೈನಾನ್ಸ್ ಷೇರುಗಳಿಗೆ ಖರೀದಿ ರೇಟಿಂಗ್‌ ನೀಡಿದ್ದು, ಇವುಗಳ ಟಾರ್ಗೆಟ್ ಬೆಲೆ ಮತ್ತು ಸ್ಟಾಪ್‌ಲಾಸ್‌ ವಿವರ ಇಲ್ಲಿದೆ.

 
Vaishali Parekh new
ಜಾಗತಿಕ ಮಾರುಕಟ್ಟೆಗಳಿಂದ ಉತ್ತಮ ಸೂಚನೆಗಳಿದ್ದು, ಭಾರತೀಯ ಷೇರು ಮಾರುಕಟ್ಟೆಯು ಕಳೆದ ನಾಲ್ಕು ಸೆಷನ್‌ಗಳಿಂದ ಸತತ ಏರಿಕೆ ದಾಖಲಿಸಿದೆ. ಮಂಗಳವಾರದ ವಹಿವಾಟಿನಲ್ಲಿ ನಿಫ್ಟಿ ಸೂಚ್ಯಂಕ 92 ಪಾಯಿಂಟ್ಸ್‌ ಏರಿಕೆ ಕಂಡು 23,557ಕ್ಕೆ ಕೊನೆಗೊಂಡರೆ, ಬಿಎಸ್‌ಇ ಸೆನ್ಸೆಕ್ಸ್ 308 ಪಾಯಿಂಟ್ಸ್‌ ಏರಿಕೆ ಕಂಡು 77,301 ಕ್ಕೆ ಕೊನೆಗೊಂಡಿತು. ಬ್ಯಾಂಕ್ ನಿಫ್ಟಿ ಸೂಚ್ಯಂಕ 438 ಪಾಯಿಂಟ್ಸ್‌ ಏರಿಕೆ ಕಂಡು 50,440ಕ್ಕೆ ಕೊನೆಗೊಂಡಿತು. ನಗದು ಮಾರುಕಟ್ಟೆಯ ಪ್ರಮಾಣವು ಶೇ 6ರಷ್ಟು ಏರಿಕೆಯಾಗಿ ₹1.43 ಲಕ್ಷ ಕೋಟಿಗೆ ತಲುಪಿದೆ.

ವೈಶಾಲಿ ಪರೇಖ್ ಅವರ ಷೇರು ಖರೀದಿ ಸಲಹೆಗಳು

ನಿಫ್ಟಿ ಸೂಚ್ಯಂಕವು ಕಳೆದ 4-5 ಸೆಷನ್‌ಗಳಿಂದ ಏರಿಕೆಯಾಗುತ್ತಿದೆ ಎಂದು ಪ್ರಭುದಾಸ್ ಲಿಲ್ಲಾಧರ್ ಬ್ರೋಕರೇಜ್‌ ಸಂಸ್ಥೆಯ ಟೆಕ್ನಿಕಲ್‌ ರಿಸರ್ಚ್‌ ವಿಭಾಗದ ಉಪಾಧ್ಯಕ್ಷ ವೈಶಾಲಿ ಪರೇಖ್ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಭಾರತೀಯ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿದೆ ಮತ್ತು ನಿಫ್ಟಿಯು ಅಲ್ಪಾವಧಿಯಲ್ಲೇ 23,800ರ ಗುರಿಯತ್ತ ಸಾಗುತ್ತಿದೆ ಎಂದು ತಿಳಿಸಿದ್ದಾರೆ. ನಿಫ್ಟಿ 23,800ಟ ಮಟ್ಟವನ್ನು ದಾಟಿದರೆ ಅಲ್ಪಾವಧಿಯಲ್ಲಿ 24,500ರ ಟಾರ್ಗೆಟ್‌ ತಲುಪಬಹುದು ಎಂದು ಅವರು ಹೇಳಿದರು.

ಇಂದು ಬುಧವಾರ (ಜೂನ್‌ 19) ಈ ಮೂರು ಷೇರುಗಳ ಖರೀದಿ ಅಥವಾ ಮಾರಾಟಕ್ಕೆ ವೈಶಾಲಿ ಪರೇಖ್ ಶಿಫಾರಸು ಮಾಡಿದ್ದಾರೆ: GNFC, ಇಂಡಸ್‌ಲ್ಯಾಂಡ್‌ ಬ್ಯಾಂಕ್ ಮತ್ತು ಮಣಪ್ಪುರಂ ಫೈನಾನ್ಸ್ ಷೇರುಗಳಿಗೆ ಖರೀದಿ ರೇಟಿಂಗ್ ನೀಡಿದ್ದು, ಈ ಷೇರುಗಳ ಟಾರ್ಗೆಟ್‌ ಬೆಲೆ ಮತ್ತು ಸ್ಟಾಪ್‌ಲಾಸ್‌ ವಿವಿರ ಇಲ್ಲಿದೆ.

ವೈಶಾಲಿ ಪರೇಖ್ ಅವರ ಷೇರು ಸಲಹೆ

1] ಜಿಎನ್‌ಎಫ್‌ಸಿ- GNFC

  • ಖರೀದಿ ಬೆಲೆ: ₹703.20
  • ಟಾರ್ಗೆಟ್‌ ಬೆಲೆ: ₹737
  • ಸ್ಟಾಪ್‌ಲಾಸ್‌: ₹688

2] ಇಂಡಸ್‌ಲ್ಯಾಂಡ್‌ ಬ್ಯಾಂಕ್

  • ಖರೀದಿ ಬೆಲೆ: ₹1508
  • ಟಾರ್ಗೆಟ್‌ ಬೆಲೆ: ₹1560
  • ಸ್ಟಾಪ್‌ಲಾಸ್‌: ₹1475

3] ಮಣಪ್ಪುರಂ ಫೈನಾನ್ಸ್

  • ಖರೀದಿ ಬೆಲೆ: ₹191.75
  • ಟಾರ್ಗೆಟ್‌ ಬೆಲೆ: ₹201
  • ಸ್ಟಾಪ್ ಲಾಸ್: ₹187

Share Market ಮತ್ತು ಷೇರು ಮಾರುಕಟ್ಟೆ ಕುರಿತು ಇತ್ತೀಚಿನ ಮತ್ತು ಬ್ರೇಕಿಂಗ್ ಸುದ್ದಿಗಳನ್ನು Business News ವೆಬ್‌ಸೈಟ್‌ ದಿ ಎಕನಾಮಿಕ್ ಟೈಮ್ಸ್‌ ಕನ್ನಡದಲ್ಲಿ ಓದಿ
ಬಾನುಪ್ರಸಾದ ಕೆ ಎನ್‌ ಅವರ ಬಗ್ಗೆ
ಬಾನುಪ್ರಸಾದ ಕೆ ಎನ್‌
ಬಾನುಪ್ರಸಾದ ಕೆ ಎನ್‌ Senior Digital Content Producer
ದಿ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಬ್ಯುಸಿನೆಸ್‌ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2012ರಿಂದಲೂ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. 2019ರ ಸೆಪ್ಟೆಂಬರ್‌ನಿಂದ ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. 2022ರ ಆಗಸ್ಟ್‌ನಿಂದ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಪತ್ರಕರ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನವಾಸಕ್ತಿ ವಿಷಯಗಳು, ಕೃಷಿ, ಹಣಕಾಸು, ಆರ್ಥಿಕತೆ, ಪರ್ಸನಲ್ ಫೈನಾನ್ಸ್‌ ವಿಷಯಗಳಲ್ಲಿ ಇವರಿಗೆ ಹೆಚ್ಚಿನ ಪರಿಣತಿ ಇದೆ. ಪ್ರವಾಸ, ಚಾರಣ, ಸಾಹಿತ್ಯ ಓದು ಇವರ ಹವ್ಯಾಸಗಳು.Read More