ITR Filing: ತೆರಿಗೆ ಪಾವತಿದಾರರಿಗೆ ವರದಾನವಾಗಿದೆ 'ಇಂಡೆಕ್ಸೇಶನ್'? ಇದು ಹೇಗೆ ತೆರಿಗೆ ಹೊರೆ ಕಡಿಮೆ ಮಾಡಲಿದೆ? ಇಲ್ಲಿದೆ ವಿವರ

Authored by ಬಾನುಪ್ರಸಾದ ಕೆ ಎನ್‌ | The Economic Times Kannada | Updated: 25 Jun 2024, 6:18 pm

ITR Filing indexation: ತೆರಿಗೆ ಪಾವತಿದಾರರಿಗೆ ಪಾವತಿಸಬೇಕಾದ ತೆರಿಗೆಯ ಹೊರೆಯನ್ನು ಕಡಿಮೆ ಮಾಡಲು 'ಇಂಡೆಕ್ಸೇಶನ್' ಅನುಕೂಲಕರವಾಗಿದೆ. ಆದರೆ, ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲ. ಹಾಗಾದರೆ ಇಂಡೆಕ್ಸೇಶನ್ ಎಂದರೇನು? ಇದು ತೆರಿಗೆ ಹೊರೆಯನ್ನು ಹೇಗೆ ಕಡಿಮೆ ಮಾಡುತ್ತದೆ? ಇದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದು ಸರಿಯಾದ ಸಮಯ. ಯಾವು ದಂಡ ಶುಲ್ಕವಿಲ್ಲದೆ ಆದಾಯ ತೆರಿಗೆ ರಿಟರ್ನ್ಸ್‌ (ITR) ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಸಾಧ್ಯವಾದಷ್ಟು ಬೇಗ ITR ಸಲ್ಲಿಕೆ ಮಡಿದರೆ, ಅಷ್ಟೇ ಬೇಗ ತೆರಿಗೆ ಪರುಪಾವತಿಯೂ ಸಿಗುತ್ತದೆ. ಈ ಸಮಯದಲ್ಲಿ ಆದಾಯ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆಂದು ತಿಳಿದುಕೊಳ್ಳಬೇಕು. ತೆರಿಗೆ ಪಾವತಿದಾರರಿಗೆ 'ಇಂಡೆಕ್ಸೇಶನ್' ವರದಾನವಾಗಿದೆ ಎನ್ನಬಹುದು. ಇದು ಪಾವತಿಸಬೇಕಾದ ತೆರಿಗೆ ಹೊರೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ಹಾಗಾದರೆ ಇಂಡೆಕ್ಸೇಷನ್‌ ಎಂದರೇನು? ಇದರಿಂದ ಏನೆಲ್ಲ ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ.
ITR Filing indexation

ಇಂಡೆಕ್ಸೇಶನ್ ಎಂದರೇನು?

ಇಂಡೆಕ್ಸೇಶನ್‌ ಎಂದರೆ ಷೇರುಗಳು, ಬಾಂಡ್‌ಗಳು ಮತ್ತು ರಿಯಲ್ ಎಸ್ಟೇಟ್‌ಗಳಲ್ಲಿನ ಹೂಡಿಕೆಗಳನ್ನು ಹಣದುಬ್ಬರಕ್ಕೆ ಸರಿಹೊಂದಿಸುವ ವಿಧಾನವಾಗಿದೆ. ಸಾಮಾನ್ಯವಾಗಿ ಆಯಾ ಹೂಡಿಕೆಗಳು ಪ್ರಸ್ತುತ ಬೆಲೆಗಳಿಗೆ ಅನುಗುಣವಾಗಿರುತ್ತವೆ. ಆದರೆ ದಿನಗಳು ಕಳೆದಂತೆ ಸ್ವಲ್ಪ ಹಣದುಬ್ಬರದಿಂದ ನಮ್ಮ ನೈಜ ಹೂಡಿಕೆಯ ಮೌಲ್ಯವು ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ಇಂಡೆಕ್ಸೇಷನ್‌ ಇತ್ತೀಚಿನ ಬೆಲೆಗಳಿಗೆ ಅನುಗುಣವಾಗಿ ನಮ್ಮ ಹೂಡಿಕೆಯನ್ನು ಸರಿಹೊಂದಿಸುತ್ತದೆ. ಸರ್ಕಾರವು ಅಧಿಕೃತವಾಗಿ ಬಿಡುಗಡೆ ಮಾಡಿದ ಚಿಲ್ಲರೆ ಹಣದುಬ್ಬರದ ಅಂಕಿಅಂಶಗಳ ಆಧಾರದ ಮೇಲೆ ಇಂಡೆಕ್ಸೇಷನ್‌ ಅನ್ನು ಲೆಕ್ಕಹಾಕಲಾಗುತ್ತದೆ. ಬಂಡವಾಳ ಹೂಡಿಕೆಯ ಮೇಲಿನ ಆದಾಯವನ್ನು ನಿಖರವಾಗಿ ಊಹಿಸಲು ಇದು ಸಹಾಯ ಮಾಡುತ್ತದೆ. ಇದು ಹಣದುಬ್ಬರವನ್ನು ಮೀರಿದ ನಿಜವಾದ ಲಾಭಕ್ಕೆ ಮಾತ್ರ ತೆರಿಗೆ ಪಾವತಿಸಲು ಸಹಾಯ ಮಾಡುತ್ತದೆ.

ಉದಾಹರಣೆಗೆ ಒಂದು ವರ್ಷದ ಹಿಂದೆ ನೀವು 100 ರೂಪಾಯಿಗೆ ಒಂದು ಪೆನ್ ಖರೀದಿಸುತ್ತೀರಿ ಎಂದು ಭಾವಿಸೋಣ. ಈಗ ಅದರ ಬೆಲೆ 120 ರೂ.ಗೆ ಹೆಚ್ಚಿದೆ ಎಂದಿಟ್ಟುಕೊಳ್ಳಿ. ಈಗ ನೀವು ಅದನ್ನು10 ರೂ. ಲಾಭಕ್ಕೆ ಮಾರಾಟ ಮಾಡುತ್ತೀರಿ. ಅಂದರೆ, ನಿಮಗೆ 30 ರೂ. ಲಾಭ ಸಿಕ್ಕಂತಾಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಇದರ ಪ್ರಸ್ತುತ ಬೆಲೆ 120 ರೂ. ಇದೆ. ಒಂದು ವರ್ಷದ ಹಿಂದಿನ ಬೆಲೆಗೆ ಹೋಲಿಸಿದರೆ ನಿಮಗೆ 30 ರೂ. ಲಾಭ ಇರುತ್ತದೆ. ಆದರೆ ಪ್ರಸ್ತುತ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ನಿಮಗೆ ಕೇವಲ 10 ರೂ. ಲಾಭ ಬಂದಿರುತ್ತದೆ. ಹೀಗೆ ಇತ್ತೀಚಿನ ಹಣದುಬ್ಬರಕ್ಕೆ ಅನುಗುಣವಾಗಿ ಖರೀದಿ ಬೆಲೆಯನ್ನು ಸರಿಹೊಂದಿಸಲು ಇಂಡೆಕ್ಸೇಷನ್‌ ಅನುಮತಿಸುತ್ತದೆ. ನೀವು ಮಾರಾಟದ ಬೆಲೆಯಿಂದ ಪೆನ್ನಿನ ಪ್ರಸ್ತುತ ಬೆಲೆಯನ್ನು ಕಳೆಯಬೇಕು. ಆಗ ನಿಮ್ಮ ಲಾಭ ಕೇವಲ 10 ರೂ. ಇರುತ್ತದೆ. ಈ 10 ರೂಪಾಯಿಗೆ ಮಾತ್ರವೇ ನೀವು ತೆರಿಗೆ ಪಾವತಿಸಬೇಕು. ಇದು ನಿಮ್ಮ ಮೇಲಿನ ತೆರಿಗೆ ಹೊರೆಯನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಇಲ್ಲವಾದರೆ ನೀವು 30 ರೂಪಾಯಿಗೂ ತೆರಿಗೆ ಪಾವತಿಸಿಬೇಕಾಗುತ್ತದೆ. ಹೀಗೆ ಮಾಡುವುದರಿಂದ ಹೂಡಿಕೆದಾರರು ದೀರ್ಘಾವಧಿ ಹೂಡಿಕೆಯಿಂದ ಹಿಂದೆ ಸರಿಯುತ್ತಾರೆ.

ಇಂಡೆಕ್ಸೇಶನ್ ಆರ್ಥಿಕತೆಯಲ್ಲಿ ಹಣದುಬ್ಬರಕ್ಕೆ ಅನುಗುಣವಾಗಿ ಹೂಡಿಕೆ ಅಥವಾ ಖರೀದಿ ಬೆಲೆಯನ್ನು ಸರಿಹೊಂದಿಸುತ್ತದೆ. ಹೀಗಾಗಿ ತೆರಿಗೆದಾರರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ. ಸೂಚ್ಯಂಕದ ಹೊಂದಾಣಿಕೆಯಿಂದಾಗಿ, ಅನೇಕ ಜನರು ದೀರ್ಘಾವಧಿಗೆ ಹೂಡಿಕೆ ಮಾಡಲು ಮುಂದೆ ಬರುತ್ತಾರೆ.

Personal Finance ಮತ್ತು ಆದಾಯ ತೆರಿಗೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಇತ್ತೀಚಿನ ಅಪ್‌ಡೇಟ್‌ ಕುರಿತು Business News ವೆಬ್‌ಸೈಟ್‌ ದಿ ಎಕನಾಮಿಕ್ ಟೈಮ್ಸ್‌ ಕನ್ನಡದಲ್ಲಿ ತಿಳಿಯಿರಿ
ಬಾನುಪ್ರಸಾದ ಕೆ ಎನ್‌ ಅವರ ಬಗ್ಗೆ
ಬಾನುಪ್ರಸಾದ ಕೆ ಎನ್‌ Senior Digital Content Producer
ದಿ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಬ್ಯುಸಿನೆಸ್‌ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2012ರಿಂದಲೂ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. 2019ರ ಸೆಪ್ಟೆಂಬರ್‌ನಿಂದ ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. 2022ರ ಆಗಸ್ಟ್‌ನಿಂದ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಪತ್ರಕರ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನವಾಸಕ್ತಿ ವಿಷಯಗಳು, ಕೃಷಿ, ಹಣಕಾಸು, ಆರ್ಥಿಕತೆ, ಪರ್ಸನಲ್ ಫೈನಾನ್ಸ್‌ ವಿಷಯಗಳಲ್ಲಿ ಇವರಿಗೆ ಹೆಚ್ಚಿನ ಪರಿಣತಿ ಇದೆ. ಪ್ರವಾಸ, ಚಾರಣ, ಸಾಹಿತ್ಯ ಓದು ಇವರ ಹವ್ಯಾಸಗಳು.Read More